18th January 2026

ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಳೆದ ಹಲವಾರು ವರ್ಷಗಳಿಂದ ಇದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಾನ್ಯ ಸಚಿವರಾದ ಎಚ್ ಕೆ ಪಾಟೀಲ್
ಅವರು ಹಲವಾರು ಯೋಜನೆಗಳು ಹಾಗೂ ಕ್ರಮಗಳ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪೌರಾಯುಕ್ತರು ಇಂಜಿನಿಯರ್ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಹೇಳುವುದರ ಮೂಲಕವಾಗಿ ಬಗೆಹರಿಸುವಂತೆ ಮಾಡುತ್ತಿದ್ದಾರೆ.
ಆದರೆ ಕೆಲವು ಕಿಡಗೇಡಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಾರದು ಎಂಬ ಉದ್ದೇಶದಿಂದ ನಗರದ ದತ್ತಾತ್ರೇಯ ರಸ್ತೆ ಟಾಂಗಾಕೂಟ ಹತ್ತಿರ ಬನ್ನಿ ಗಿಡದ ಹತ್ತಿರ ಕುಡಿಯುವ ನೀರಿನ ಪೈಪಿಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿ ಕುಡಿಯುವ ನೀರಿನ ಸರಬರಾಜು ಆಗದಂತೆ ಮಾಡುತ್ತಿದ್ದಾರೆ ಇದರಿಂದಾಗಿ ಕಿಡಿಗೇಡಿಗಳು ಮಾನ್ಯ ಸಚಿವರಾದ ಎಚ್ ಕೆ ಪಾಟೀಲ್ ಅವರ ಘನತೆಗೆ ಹಾಗೂ ಪೌರಾಯುಕ್ತರು ನಗರಸಭೆಯ ಅಧಿಕಾರಿಗಳಿಗೆ ಮಸಿ ಬಳಿಯುವ ಹೊನ್ನಾರ ನಡೆದಿದೆಯೇ ಎಂದು ಪ್ರಶ್ನೆಯಾಗಿದೆ?
ಗದಗ್ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಾನ್ಯ ಸಚಿವರಾದ ಎಚ್ ಕೆ ಪಾಟೀಲ್ ಅವರು ಶುದ್ಧ ನೀರಿನ ಘಟಕಗಳನ್ನು ತೆರೆಯುವುದರ ಮೂಲಕ ಶುದ್ಧ ನೀರಿನ ಘಟಕದ ಹರಿಕಾರನಾಗಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಇಂತಹ ಯೋಜನೆಗಳನ್ನು ಮಾಡುತ್ತಿದ್ದಾರೆ ಆದರೆ ಕಿಡಗೇಡಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಇನ್ನೂ ಹೆಚ್ಚಿಗೆ ಮಾಡಬೇಕೆಂದು ಕುಡಿಯುವ ನೀರಿನ ಪೈಪಿಗೆ ಕಲ್ಲು ಹಾಕುವುದರ ಮೂಲಕ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಾರದೆಂದು ಉದ್ದೇಶವನ್ನು ಇಟ್ಟುಕೊಂಡಿದ್ದಾರೆಯೇ ಎಂಬುದು ಪ್ರಶ್ನಾರ್ತಿತವಾಗಿದೆ ?
ನಗರಸಭೆ ವತಿಯಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪೌರಾಯುಕ್ತರು ಇಂಜಿನಿಯರ್ ಹಾಗೂ ಅಧಿಕಾರಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದು ಇಂತಹ ಕಿಡಿಗೇಡಿಗಳ ಕೆಲಸದಿಂದಾಗಿ ಪೌರಾಯುಕ್ತರು
ಇಂಜಿನಿಯರ್ ಹಾಗೂ ಅಧಿಕಾರಿಗಳು ಕೆಲಸ ವ್ಯರ್ಥವಾಗುವಂತಿದೆ
ಬೇಸಿಗೆ ಕಾಲವು ಸಮೀಪಿಸುತ್ತಿರುವಾಗ ಕಿಡಿಗೇಡಿಗಳು ಇಂತಹ ಕೆಲಸದಿಂದಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಆಗದೆ ಅವಳಿ ನಗರದ ಸಾರ್ವಜನಿಕರು ದಿನನಿತ್ಯ ಕುಡಿಯುವ ಕುಡಿಯುವ ನೀರಿನ ಸಮಸ್ಯೆ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ
ಆದ್ದರಿಂದ ಮಾನ್ಯ ಸಚಿವರು ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಜನರ ಕುಡಿಯುವ ನೀರಿನ ಸಮಸ್ಯೆಗೆ ಸಹಕರಿಸುವಂತಾಗಲಿ.
ಬಾಕ್ಸ್.
ದತ್ತಾತ್ರೇಯ ರಸ್ತೆ ಟಾಂಗಾಕೂಟ ಹತ್ತಿರ ಬನ್ನಿ ಗಿಡದ ಹತ್ತಿರ ಒಂದುವರೆ ತಿಂಗಳದ ಹಿಂದೆ ಕುಡಿಯುವ ನೀರಿನ ಪೈಪು ಬ್ಲಾಕ್ ಆಗಿತ್ತು ಇದರಿಂದಾಗಿ ಅಲ್ಲಿಂದ ನೀರಿನ ಸರಬರಾಜಿಗೆ ತೊಂದರೆ ಉಂಟಾಗಿತ್ತು
ನಮ್ಮ ಸಿಬ್ಬಂದಿಗಳು ಕುಡಿಯುವ ನೀರಿನ ಪೈಪ್ ಒಡೆದು ತೆಗೆದಾಗ ಕಿಡಿಗೇಡಿಗಳು ಕಲ್ಲು ಹಾಕಿದ್ದರಿಂದಾಗಿ ಪೈಪ್ ಬ್ಲಾಕ್ ಆಗಿತ್ತು ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ
ಮಾನ್ಯ ಸಚಿವರು ನಗರಸಭೆಯವರದು ಇಂಜಿನಿಯರ್ ಅವರ ಕುಡಿಯುವ ನೀರಿನ ಸಮಸ್ಯೆಯ ಬಗೆಹರಿಸಬಾರದು ಎಂಬುವ ಉದ್ದೇಶದಿಂದ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಇನ್ನೂ ಹೆಚ್ಚಿಗೆ ಮಾಡಬೇಕು ಎಂಬ ಉದ್ದೇಶದಿಂದ ಮಾಡುತ್ತಿದ್ದಾರೆ.
ನಗರಸಭೆಯ ಇಂಜಿನಿಯರ್ : ಲಕ್ಷ್ಮಣ ಜೋಗದಂಡಕರ
undefined